ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆಒಲಿದು ಬಂದ “ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ -2025”
ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿ,ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ANYELP ಗ್ರೂಪ್ಸ್ ಪ್ರತಿಷ್ಠಿತ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ- 2025 ನೀಡಿ ಗೌರವಿಸಿದೆ.
ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೆ.11ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆವಾರ್ಡ ನೀಡಿ ಗೌರವಿಸಲಾಯಿತು.
ಕಳೆದ ಏಳೆಂಟು ವರ್ಷಗಳಲ್ಲಿ ಗುರುವಾಯನಕೆರೆ ಪರಿಸರದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಐದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಸಂಸ್ಥೆ ಪ್ರಾರಂಭಿಸಲಾಗಿದೆ. ಎಕ್ಸೆಲ್ ಕಾಲೇಜಿನಲ್ಲಿ ಕಲಿತ ಪ್ರತಿ ವಿದ್ಯಾರ್ಥಿ ಹೆತ್ತವರಿಗೆ,ಸಮಾಜಕ್ಕೆ ಆಸ್ತಿಯಾಗಬೇಕು. ಊರಿಗೆ ಕೀರ್ತಿ ತರಬೇಕು. ದೇಶಕ್ಕೆ ಶಕ್ತಿಯಾಗಬೇಕು ಎಂಬ ಚಿಂತನೆ ಸುಮಂತ್ ಕುಮಾರ್ ಜೈನ್ ಅವರದು.
ಸುಮಂತ್ ಕುಮಾರ್ ಜೈನ್ ಅವರಿಗೆ ಸುವರ್ಣ ರಾಷ್ಟೀಯ ವಾಹಿನಿ ಹಾಗೂ ಕನ್ನಡ ಪ್ರಭ ಪತ್ರಿಕೆಯ ಉಜ್ವಲ ಉದ್ಯಮಿ ಪ್ರಶಸ್ತಿ, ಬೆಹರಿನ್ – ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ, ಮಲೇಷಿಯಾ – ಇಂಡಿಯಾ ಐಕಾನಿಕ್ ಅವಾರ್ಡ್, ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ, ಯಕ್ಷ ಭಾರತಿ ದಶಮಾನೋತ್ಸವ ಪುರಸ್ಕಾರ, ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ.